About Kannada Department
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ತನ್ನದೇ ಆದ ಪ್ರತಿಭಾವಂತ ಅಧ್ಯಾಪಕ ಮತ್ತು ವಿಧ್ಯಾರ್ಥಿ ಪರಂಪರೆಯನ್ನು ಹೊಂದಿದ್ದು, ಕಳೆದ 66 ವರ್ಷಗಳಿಂದ ಶೈಕ್ಷಣಿಕ ಹಾಗೂ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ವಿದ್ಯಾರ್ಥಿ ಹಾಗೂ ಪೋಷಕರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸುತ್ತಾ ತನ್ನನ್ನು ತಾನು ರೂಪಿಸಿಕೊಂಡು ಬರುತ್ತಿದೆ. ಉತ್ತಮ ಶೈಕ್ಷಣಿಕ ಅರ್ಹತೆ ಮತ್ತು ಬದ್ಧತೆಯುಳ್ಳ ಅಧ್ಯಾಪಕರನ್ನು ಹೊಂದಿ, ವಿದ್ಯಾರ್ಥಿಗಳ ಭಾಷಾ ಕೌಶಲ್ಯಗಳು ಹಾಗೂ ಜೀವನ ಮೌಲ್ಯಗಳನ್ನು ಹೆಚ್ಚಿಸುವುದರ ಮೂಲಕ ಅವರ ಮಾನವೀಯ ನಡವಳಿಕೆಗಳನ್ನು ಉತ್ತಮಗೊಳಿಸುವ ಪ್ರಯತ್ನಮಾಡಲಾಗಿದೆ.
ಕಾಲೇಜಿನ ಬಿಎಸ್ಸಿ, ಬಿಸಿಎ, ಬಿಎಸ್ಸಿ(ಆನರ್ಸ್) ಕೋರ್ಸುಗಳಿಂದ ಒಟ್ಟು 1000 ಕ್ಕೂ ಹೆಚ್ಚಿನ ವಿದ್ಯಾರ್ಥಿ/ನಿ ಯರನ್ನು ವಿಭಾಗವು ಹೊಂದಿದೆ. ಇವರೆಲ್ಲರಿಗೂ ಸಕಾಲಿಕವಾಗಿ ಕಿರುಪರೀಕ್ಷೆ ಮತ್ತು ವಿಚಾರಸಂಕಿರಣಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬರಲಾಗಿದೆ. ಹಾಗೆಯೇ ವಿಭಾಗದ ಎಲ್ಲಾ ಅಧ್ಯಾಪಕರು ಬೋಧನೆ ಹಾಗೂ ಸಂಶೋಧನಾ ಚಟುವಟಿಕೆಗಳ ಜೊತೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ಕಾರಣದಿಂದಾಗಿ ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಅಧ್ಯಾಪಕರ ಗುಣಮಟ್ಟ ಅತ್ಯುತ್ತಮವಾಗಿದೆ ವಿಭಾಗವು ವಿದ್ಯಾರ್ಥಿ/ನಿಯರು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಸಾಂಸ್ಕøತಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಅನುಕೂಲವಾಗುವಂತೆ ಚಿಗುರು-ಚಿಗುರು ಸಾಹಿತ್ಯ ಗೋಡೆ ಪತ್ರಿಕೆಯನ್ನು ನಡೆಸಲಾಗುತ್ತಿದೆ. 2012 ರಿಂದ ಸಹ್ಯಾದ್ರಿ ಕನ್ನಡ ಸಂಘವನ್ನು ಆರಂಭಿಸಿದ್ದು ವಿದ್ಯಾರ್ಥಿಗಳ ಆಂತರಿಕ ಸುಪ್ತ ಪ್ರತಿಭೆಯನ್ನು ಬೇಳಕಿಗೆ ತರುವ ಪ್ರಯತ್ನ ನಡೆದಿದೆ.